ಭಾನುವಾರ, ಸೆಪ್ಟೆಂಬರ್ 19, 2010

are you writing resume

The below mentioned points are the tips you should remember while writing a resume.Resume should be well written to increase the chance of being invited for an interview. The candidate should take effort to create a resulme that will make him stand among other probable candidates, so resume is the professional reflection of individuals who are applying or looking for a job or employment.

more read
http://www.tipsoninterview.com/tips-for-writing-resume.html

ಶನಿವಾರ, ಸೆಪ್ಟೆಂಬರ್ 18, 2010

ಇದು ಬಿ.ಆರ್. ಸತ್ಯನಾರಾಯಣ ಅವರ ನಂದೊನ್ಮಾತು ಬ್ಲಾಗ್‌ನಿಂದ ಕಡ ಪಡೆದಿದ್ದು. ನೆಲದಜನ ಓದುಗರಿಗಾಗಿ ಇಲ್ಲಿ ಪ್ರಕಟಿಸಲಾಗಿದೆ.


ಇವರು ಯಾರು ಬಲ್ಲಿರೇನು?
ಲೇಖಕರೊಬ್ಬರ ಕೃತಿಯೊಂದಿಗೆ ನಡೆಸಿದ ಅನುಸಂಧಾನದಿಂದ ಹೊರಹೊಮ್ಮಿದ ಈ ಕೆಳಗಿನ ಸಾಲುಗಳನ್ನು ಓದುತ್ತಿದ್ದ ಹಾಗೆ, ನನ್ನ ಪ್ರಶ್ನೆಗೆ ನಿಮಗೆ ಉತ್ತರ ಹೊಳೆದೇ ಇರುತ್ತದೆ. ಕೊನೆಯಲ್ಲಿ ಅವರ ಫೋಟೋ ಕೂಡಾ ಇದೆ. ಜೊತೆಗೆ ಒಂದು ಕ್ಲೂ ಕೂಡಾ!
ದೇವರು ಇದ್ದಾನೋ ಇಲ್ಲವೋ. ಆದರೆ ಇದ್ದಾನೆ ಎಂದಾಗ ಆಗುವ ವಿಸ್ಮಯ, ಇಲ್ಲ ಎಂದಾಗಲೂ ಆಗುತ್ತದೆ. ಅಂತಹ ವಿಸ್ಮಯಗಳ ಹುಡುಕಾಟ ಇವರ ಹವ್ಯಾಸ.
ಒಬ್ಬ ಮನುಷ್ಯ ಸಾಮಾಜಿಕವಾಗಿ ಸ್ವಲ್ಪ ಗುರುತಿಸಲ್ಪಟ್ಟರೆ ಸಾಕು. ಅವನನ್ನು ಒಂದು ಫಂಥಕ್ಕೆ ಸೀಮಿತಗೊಳಿಸಿ, ಅವನ ಪ್ರಗತಿಪರವಾದ, ಜೀವಪರವಾದ ನಿಲುವುಗಳನ್ನು ಮೂಲೆಗುಂಪು ಮಾಡುವ ಪ್ರತಿಗಾಮಿತನ ಶಕ್ತಿಮೂಲ ಯಾವುದು?
ಬಹುಸಂಸ್ಕೃತಿಯ, ಧಾರ್ಮಿಕತೆಯ ನಾಡಿನಲ್ಲಿ ಸಹಬಾಳ್ವೆ ಸಾದ್ಯವಿರುವೆಡೆಯಲ್ಲೆಲ್ಲಾ ಅಂತರಂಗದಲ್ಲಿ ಕ್ರೋಧ, ದ್ವೇಷಗಳಂತೆ ಜಾತಿಯತೆಯೂ ಸ್ಥಾಯಿಯಾಗಿ ಇರುವುದರಿಂದ ಸಾಂಸ್ಕೃತಿಕ ಚಿದ್ರೀಕರಣವಾಗುತ್ತಿರುವುದು.
ಒಳಗೊಳಗೇ ಮತ್ತೆ ಗಟ್ಟಿಯಾಗುತ್ತಿರುವ ಜಾತೀಯತೆ. ಜಾಗತೀಕರಣದ ತೀವ್ರತರ ಪ್ರಭಾವ ಮತ್ತು ಪರಿಣಾಮದಿಂದಾಗಿ ಜಾತೀಯತೆಯ ಬೇರುಗಳು ಸಡಿಲವಾಗಬಹುದೆಂಬ ಆಶಾಭಾವನೆ.
ಸನಾತನವಾದಿಗಳ ಪ್ರಕಾರ ಗುರುಪೀಠದ ಹಕ್ಕೇ ಇಲ್ಲದ ಶೂದ್ರಪರಂಪರೆಯ ಮಠಗಳೂ ಸಹ ಬೆಳ್ಳಿಕಿರೀಟ, ಅಡ್ಡಪಲ್ಲಕ್ಕಿ ಉತ್ಸವ ಪಾದಪೂಜೆ ಮೊದಲಾದವುಗಳಲ್ಲಿ ತೊಡಗುತ್ತಿರುವುದು.
ಸ್ವಲ್ಪಮಟ್ಟಿನ ವೈಚಾರಿಕತೆಯನ್ನು ಮೈಗೂಡಿಸಿಕೊಂಡಿರುವರಿಗೇ (ನನ್ನನ್ನೂ ಸೇರಿಸಿಕೊಂಡು) ಬೆಕ್ಕು ಅಡ್ಡ ಹೋಗುವುದನ್ನು ನೋಡಿ ’ತಥ್’ ಎನ್ನುವಂತೆ ಆಗುತ್ತದೆ. ಅಂದರೆ ಈ ನಂಬಿಕೆಗಳು ಆನುಷಂಗಿಕವೋ ಎಂಬ ಭಾವ.
ಯಾವುದರ ವಿರುದ್ದ ಶೂದ್ರರು ಸೆಟೆದು ನಿಂತಿದ್ದರೊ ಅದರ ಬಗ್ಗೆಯೇ ಮೃದುವಾದರೆಂದರೆ ಶುದ್ರರೂ ದಲಿತರೂ ಮತ್ತೆ ಸನಾತನಿಗಳ ಊಳಗಕ್ಕಿಳಿಯುವ ಸಾಧ್ಯತೆ.
ಮುಸ್ಲಿಂ ಮೂಲಭೂತವಾದದ ದೆಸೆಯಿಂದ ಉದ್ದೀಪನಗೊಳ್ಳುತ್ತಿರುವ ಹಿಂದೂ ಮೂಲಭೂತವಾದದ ಪರಿಣಾಮಗಳು.
ಶಿಕ್ಷಣ ಪದ್ಧತಿ, ಮಾಧ್ಯಮ ಮತ್ತು ಗುಣಮಟ್ಟ. ಟೀ.ವಿ. ಚಾನೆಲ್‌ಗಳನ್ನು ಬದಲಾಯಿಸುವಂತೆ, ನಮ್ಮ ನಾಯಕರುಗಳು ಬದಲಾಯಿಸುತ್ತಿರುವ, ದೂರಗಾಮಿತ್ವವಿಲ್ಲದ ಶಿಕ್ಷಣ ನೀತಿ.
ಶಿಕ್ಷಕ ಸಮುದಾಯದ ನಿಷ್ಕ್ರೀಯತೆ. ಪಠ್ಯೇತರ ಜ್ಞಾನದ ಬಗೆಗಿನ ಅನಾದರ. ಸಾಹಿತ್ಯವು ಅಧ್ಯಾಪಕರ ಸೊತ್ತಾಗಿರುವುದು. ಸಾಹಿತಿಗಳೆನಿಸಿಕೊಂಡವರಲ್ಲಿ ಹೆಚ್ಚುತ್ತಿರುವ ಜ್ಞಾನದ ಅಹಂಕಾರ ಮತ್ತು ಜ್ಞಾನ ಮೂಲದ ನಿರಾಕರಣೆ.
ತನ್ನ ಅನುಭವ ಮತ್ತು ಆಲೋಚನೆಗಳನ್ನು ಇತರರಿಗೆ ವರ್ಗಾಯಿಸುವ ಅತ್ಯಂತ ಕ್ಷಿಪ್ರ ಮತ್ತು ಸಮರ್ಥ ಮಾರ್ಗದ ಅನ್ವೇಷಣೆ.
ಕಾಲ, ತಂತ್ರಜ್ಞಾನ ಇವುಗಳ ಬದಲಾವಣೆಯ ವೇಗದೊಂದಿಗೆ ಬದಲಾಗದ ಕನ್ನಡ ಭಾಷೆ. ಕಂಪ್ಯೂಟರ್ ಕ್ಷೇತ್ರದಲ್ಲಿ ಕನ್ನಡವನ್ನು ಬಳಸಲು ಇರುವ ಹಿಂಜರಿಕೆ.
ಪುಸ್ತಕೋದ್ಯಮದ ಶಿಥಿಲ ವ್ಯವಸ್ಥೆ ಹಾಗೂ ಭ್ರಷ್ಟಾಚಾರ. ಸುಳ್ಳು ಹೇಳದೆ, ಮೋಸ ಮಾಡದೆ, ಅನ್ಯಾಯವೆಸಗದೆ ಇಪ್ಪತ್ತನಾಲ್ಕು ಗಂಟೆ ಕಳೆಯುವುದು ಸಹ ಈ ದೇಶದಲ್ಲಿ ದುರ್ಭರವಾದ ಮಹಾಸಾಹಸವಾಗುತ್ತಿರುವುದು.
ಎಲ್ಲಾ ಚಳುವಳಿಗಳು, (ಉದಾಹರಣೆಗೆ ಜಾತಿವಿನಾಶ ಚಳುವಳಿ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ, ನವ್ಯ, ದಲಿತ ಮತ್ತು ಬಂಡಯ, ಇತ್ತಿಚಿನ ಪರಿಸರ ಚಳುವಳಿಗಳು) ಕೇವಲ ಸಾಹಿತ್ಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗುತ್ತಿರುವುದು. ಸಾಮಾಜಿಕ ಆಯಾಮವನ್ನು ದಕ್ಕಿಸಿಕೊಳ್ಳದೇ ಇರುವುದು. ಗೋಕಾಕ್ ಮತ್ತು ರೈತ ಚಳುವಳಿಗಳು ಸಾಹಿತ್ಯೇತರ ಚಳುವಳಿಯಾಗಿದ್ದರೂ ಸಾಮಾಜಿಕ ಎಚ್ಚರ ಮೂಡಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದು.
ಆಯಾಯ ಕಾಲಧರ್ಮವನ್ನು ಅನುಸರಿಸಿ ಸಮಾಜೋದ್ಧಾರದಲ್ಲಿ ನಿರತರಾದವರನ್ನು ನೇತಾರರನ್ನು ಅವರುಗಳ ಹೆಸರನ್ನು ಹೇಳಿಕೊಂಡು ತಿರುಗಾಡುತ್ತಿದ್ದರೆ ಅಭಿವೃದ್ಧಿ ಸಾಧ್ಯವೇ ಇಲ್ಲ. ಇಂದಿನ ಸಮಸ್ಯೆಗಳೇ ಬೇರೆ ಸ್ವರೂಪದವುಗಳು. ಆದ್ದರಿಂದ ಯಾವುದೇ ನಾಯಕ- ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಲೋಹಿಯಾ ಸೇರಿದಂತೆ ಯಾವುದೇ ನಾಯಕರು ಇಂದು ರಿಲವೆಂಟ್ ಆಗಿ ಉಳಿದಿಲ್ಲ.
ವೈಚಾರಿಕತೆ ಎಂಬುದನ್ನು ಕೇವಲ ಧಾರ್ಮಿಕವಾದ, ಕೋಮುವಾದ ಮತ್ತು ಸಾಹಿತ್ಯವಾದದ ಹಿನ್ನೆಲೆಯಲ್ಲಿ ಮಾತ್ರ ಏಕೆ ನೋಡಲಾಗುತ್ತಿದೆ? ವೈಚಾರಿಕತೆಯ ನಿಲುವುಗಳನ್ನು ಆರ್ಥಿಕ ಮತ್ತು ಸಾಮಾಜಿಕ ಆಯಾಮಗಳಿಂದ ಏಕೆ ನೋಡಲಾಗುತ್ತಿಲ್ಲ?
ಮನುಷ್ಯನನ್ನು ಒಟ್ಟು ಪರಿಸರದಿಂದ ಬೇರೆಯಾಗಿಯೇ ನೋಡುತ್ತಿರುವುದರಿಂದ ಆಗುತ್ತಿರುವ ದುರಂತ.

ಬುಧವಾರ, ಆಗಸ್ಟ್ 25, 2010

shashan's of karnataka
















ಬುಧವಾರ, ಜುಲೈ 28, 2010

ನಾನೇನು ಕಮ್ಮಿ ?


ಇದೇನಪ್ಪ ಒಂದೇ ಗಳಿಗೆಯಲ್ಲಿ ಮೂರು, ಮೂರು ಫೋಟೋಗಳನ್ನು ಪಬ್ಲಿಷ್‌ ಮಾಡುವಂತಾಯಿತು. ಅದೇನದು ಅವರ ನಾಯಿ ಅಷ್ಟೊಂದು ಗ್ರೇಟಾ... ನೋಡ್ರಿ ಇಲ್ಲಿ ನಮ್ಮ ರಾಂಬೋ ಹೇಗಿದ್ದಾನೆ ಅಂತಾ ಫೋಟೋ ಕಳಿಸಿದ್ದಾರೆ ನೆಲಮಂಗಲದಿಂದ ಸತೀಸ್‌.... ಸರಿಯಪ್ಪ ನೋಡೋಣ .....

ಹೇಗಿದೆ ನಮ್ಮ ನಾಯಿ...


ಏನ್‌ ಮಾರಾಯಾ? ಇದೆಂಥಾ ನಾಯಿಯಪ್ಪ? ನೋಡಿದರೆ ಭಯ ಆಗುತ್ತೆ, ಅದೇನು ನಿನ್ನ ಮೇಲೆ ಎಗರುತ್ತಿದೆಯಾ, ಭಯ ಆಗ್ತಿಲ್ವಾ!??
ಏನಿಲ್ಲ ಬಿಡಿ... ಅದು ನನ್ನ ಪೆಟ್‌... ನನ್ನ ನೋಡಿದರೆ ಅದಕ್ಕೆ ಖುಷಿಯೋ ಖುಷಿ... ನನ್ನೊಂದಿಗೆ ಅದು ಜಸ್ಟ್‌ ಡ್ಯಾನ್ಸ್‌ ಆಡ್ತಾ ಇದೆ ಅಷ್ಟೆ ಅಂತಾ ಹೇಳ್ತಿದ್ದಾರೆ ಯಲಚಗೆರೆಯ ಲೋಚನ್‌,...
ಈಗಷ್ಟೇ ಬಿ.ಇ. ಕಂಪ್ಯೂಟರ್‌ ಸೈನ್ಸ್‌ ಮುಗಿಸಿರುವ ಇವರಿಗೆ ಅವರ ರಾಕ್‌ ಜೊತೆ ಆಡುವುದೇ ಕೆಲಸವಂತೆ. ನೌಕರಿ ಸಿಕ್ಕ ಮೇಲೆ ತನ್ನ ರಾಕ್‌ ಜೊತೆ ಆಡಲು ಸಮಯ ಸಿಗೋಲ್ಲ ಅನ್ನೋ ಬೇಜಾರಲ್ಲಿ ಈ ಹುಡುಗ ಇದ್ದಾನಂತೆ. ಏನ್‌ ಆಗ್ಲಿ ನಮ್ಮ ಬ್ಲಾಗ್‌ಗೆ ಫೋಟ್‌ ಕಳುಹಿಸಿದ ಅವರಿಗೆ ಥ್ಯಾಂಕ್ಸ್‌....

what a nice ಅಲ್ವಾ!??


ಅಬ್ಬಾ ಏನಿದು? ಎಂಥ ಆಕರ್ಷಣೆ ಅಲ್ಲವೇ? ನಿಮ್ಮ ಮನೆಯ ಮುದ್ದು ಸಾಕುನಾಯಿಗಳ ಫೋಟೋ ಕ್ಲಿಕ್‌ ಮಾಡಿ ನಮಗೆ ಕಳುಹಿಸಿ ಕೊಡುತ್ತೀರಾ? ನಮ್ಮ http://peoplesnews-neladajana.blogspot.com/ನಲ್ಲಿ ನಾವು ಪಬ್ಲಿಷ್‌ ಮಾಡುತ್ತೇವೆ> . ಅದು ಮುದ್ದುಸಾಕು ನಾಯಿ ಇತರರನ್ನು ಖುಷಿಪಡಿಸಲಿ. ಅಂದಹಾಗೆ ಕೆಲವು ಸರ್‌ಪ್ರೈಸ್‌ ಗಿಪ್ಟ್‌ ಕೂಡ ಉಂಟು.
aಇಲ್ಲಿಗೆ ಮೇಲ್‌ ಮಾಡಿ. negilu.noga75@gmail.com

ಮಂಗಳವಾರ, ಜುಲೈ 27, 2010

arundhati roy a people icon




author arundahi ray have been named be the Forbes magazine as among the world's one of the most inspiring women.


arundati ray comes in third on the list of thirty women, while nooye, India bron, Pepsi co head indra nooyi rank 10.


arundathi ray, a simple and people friendly writer. she was visited mangalore three years ago, she has main speaker of the programme, conducted some organisations.


recently she has cereated controvarsy about wrote a leanthy artical in out look about maovoist.

ಸೋಮವಾರ, ಜುಲೈ 26, 2010

ಕೋಗಿಲೆ ಕಂಠ ಕರ್ಕಶ

ಆ ದಿನ ಬಿದ್ದ ಕಣ್ಣಿರ ಬಿಂದುಗಳು
ಹೀಗೆ ಬದುಕನ್ನು ಕೊಚ್ಚಿಕೊಂಡು ಹೋದವೆ?
ಯಾಕಾದರೂ ಬಂದಿತು ಆ ದಿನ, ಆ ಸಮಯ
ಕೋಗಿ ಕೂಡ ಕರ್ಕಶ


ತಾಳಿ, ಗಟ್ಟಿಮೇಳ, ರೆಶಿಮೆ
ಸೀರೆಗಳ ಸರಪರ ಸದ್ದಿನ ಗಾನ
ಪುನರ್ವಸು ಪುಷ್ಯದ ಸಡಗರಕ್ಕೆ
ಎಲ್ಲಿ ಕಾಣಬೇಕು ಕಣ್ಣೀರ ಬಿಂದುಗಳು


ಮರದ ಬಂಡಿಯ ಕುಲುಕಾಟ
ಪಯಣೀಸಲೇ ಬೇಕು,ಇರಲಿ......ಇಲ್ಲದಿರಲಿ
ಒಳ ಒಳಗೆ ಚಿತಾಗ್ನಿ, ಹೊರಗೆ
ಮೌನ ಮೀರಿ ನಗದಿದ್ದರೆ ?


ಬಿರುಗಾಳಿಗೂ ಮುನ್ನ ಮೌನ
ಒಮ್ಮೊಮ್ಮೆ ಭೂಮಿ ಸವರಿದಂತೆ ಬೀಗಬೇಕು
ಕಟ್ಟಿದ ಕನಸುಗಳೆಷ್ಟೋ ? ಬಯಕೆಗಳಿಗೆ
ಲೆಕ್ಕವಿಟ್ಟವರಾರು ?


ಒಳಗೆ ಸುಂಟರಗಾಳಿಯ ಮೊರೆತ
ಹೊರಗೆ ಲಾವಣ್ಯದ ಲಾಲಸ್ಯದ ನಗು
ಎಲ್ಲಿ ಕಾಣಬೇಕು ? ನನ್ನೊಳಗಿನ ಕಣ್ಣೀರು....




ಅವರ ಕನಸುಗಳ ಬೆನ್ನುಹತ್ತಿ

ಆತ ಪೋಟೋ ಕ್ಲಿಕ್ ಮಾಡಲು ಬಿಡಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಈ ಇಬ್ಬರು ಹೀರೋಗಳು ತೆರೆಯ ಮರೆಯ ಕಾಯಿಗಳಂತೆ ಈಗಲೂ ಇದ್ದಾರೆ. ದಕ್ಷಿಣ ಕನ್ನಡದ ಜಿಲ್ಲೆಯ ಆದಿವಾಸಿ ಜನರಾದ ಕೊರಗರ ಅಭಿವೃದ್ಧಿಗಾಗಿ ದುಡಿಯುತ್ತಿರುವ ಶೀನ ಶೆಟ್ಟಿ, ಕೃಷ್ಣಮೂಲ್ಯ ಅವರೆ ಈ ತೆರೆಯಮರೆಯ ಹೀರೋಗಳು. ಮಂಗಳೂರಿನಲ್ಲಿ ಇವರ ಸಖ್ಯ ನನ್ನೊಂದಿಗೆ ಬೆಳೆಯಿತು. ಇವರೊಂದಿಗೆ ನಾನು ಕೂಡ ದಕ್ಷಿಣ ಕನ್ನಡ ಜಿಲ್ಲೆಯನ್ನು ಪೂರಾ ಸುತ್ತು ಹೊಡೆದಂದ್ದಾಯಿತು, ಏನಿವರ ಕನಸುಗಳು ಅಂತಾ ಕೆದಕುತ್ತಾ ಹೋದಂತೆ ಜನರಿಗೆ ತಮ್ಮ ಜೀವನವನ್ನೆ ಸಮರ್ಪಣೆ ಮಾಡಿಕೊಂಡ ಕಥನ ಬಿಚ್ಚಿಕೊಳ್ಳುತ್ತದೆ.
ಶೀನಶೆಟ್ಟಿ, ಕೃಷ್ಣಮೂಲ್ಯರು ನಕುಲ,ಸಹದೇವ, ಲವ-ಕುಶ ಇದ್ದಂತೆ, ಅವರಿಬ್ಬರು ಒಬ್ಬರಿಗೊಬ್ಬರು ಬಿಟ್ಟಿರುವುದಿಲ್ಲ. ಸಮಾಜಕಾರ್ಯದಲ್ಲಿ ಆಗಿನ ಕಾಲಕ್ಕೆ ಸ್ನಾತಕೋತ್ತರ ಪದವಿ ಪಡೆದರೂ ಅವರು ಎಂದೆಂದಿಗೂ ಕೆಲಸ ಆಸೆಯ ಗುರಿ ಹೊತ್ತವರೆ ಅಲ್ಲ. ಬ್ಯಾಂಕುಗಳಲ್ಲಿ ಉದ್ಯೋಗ ಅರಸಿ ಬಂದರೂ ಅದನ್ನು ಒಲ್ಲೆ ಎಂದವರು, ತಮ್ಮ ಸಣ್ಣ ವಯಸ್ಸಿನಲ್ಲೆ ಸಮಾಜ ಸೇವೆಯ ತುಡಿತ ಬೆಳೆಸಿಕೊಂಡ ಇವರಿಬ್ಬರು ದಕ್ಷಿಣ ಕನ್ನಡ ಜಿಲ್ಲೆಯ ಅಣ್ಣಾ ಹಜಾರೆ ಇದ್ದಂತೆ. ನವ ಸಾಕ್ಷರರ ಆಂದೋಲನದ ಮೂಲಕ ಜಿಲ್ಲೆಯ ಮೂಲೆ ಮೂಲೆಗಳನ್ನು ಎಡ ತಾಕಿರುವ ಇವರು ಅದರಲ್ಲಿ ಸಾಧಿಸಿರುವ ಪ್ರಗತಿ ಅಸಾಧಾರಣ.
೮೦ರ ಪ್ರಾಯದ ಚೀಂಕ್ರ ಮೂಲ್ಯ ಜೀವನ ಸಾಧನೆ ಕೃಷ್ಣ, ಶೀನ ಶಟ್ಟಿ ಅವರ ಆಸಧಾರಣ ಸಮಾಜ ಸೇವೆಗೆ ಒಂದು ಉದಾಹರಣೆ. ಕುಡಿತ, ಹೆಣ್ಣು ಮಕ್ಕಳ ಕೀಟಲೆ, ಹೆಂಡತಿಯೊಂದಿಗೆ ಜಗಳ ಬಡಿದಾಟದಲ್ಲೇ ಜೀವನ ಕಂಡಿದ್ದ ಚೀಂಕ್ರ ಪೂಜಾರಿ ಇಂದು ದಕ್ಷಿಣ ಕನ್ನಡ ಜಿಲ್ಲೆ ಅಲ್ಲದೇ ರಾಜ್ಯದ ಇತರೆ ಜಿಲ್ಲೆಗಳಲ್ಲಿ ನಡೆದ ಸಾಕ್ಷರತಾ ಶಿಬಿರಗಳಲ್ಲಿ ಸಂಪನ್ಮೂಲ ಮತ್ತು ಕಲಿಯುವವರ ಪ್ರೇರಕ ಶಕ್ತಿಯಾದ ಹಿಂದೆ ಈ ಅಣ್ಣ ಹಜಾರೆ (ಮೂಲ್ಯ, ಶೆಟ್ಟಿ) ಇದ್ದಾರೆ. ಕೊರಗ ಸಮುದಾಯದ ಕಮಲ ಗ್ರಾಮ ಪಂಚಾಯತ್‌ ಸದಸ್ಯೆಯಾಗಿ ಆಯ್ಕೆ ಯಾದುದ್ದರ ಹಿಂದೆ ಇವರ ಶ್ರಮವಿದೆ. ಮಾಧ್ಯಮದಿಂದ ದೂರವೇ ಉಳಿಯುವ ಈ ಇಬ್ಬರು ದುಡಿವ, ನೆಲದ ನಾಯಕರು, ಸಾಮೂಹಿಕ ಶ್ರಮದಾನದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಚ್ಛತಾ ಆಂದೋಲನದ ಹೊಸ ಮಾದರಿಗಳನ್ನೆ ಹುಟ್ಟಿಹಾಕಿದರು, ಗೋಳ್ತಮಜಲು ಮಾದರಿ, ಇರಾ ಮಾದರಿಗಳು ಇಡೀ ರಾಜ್ಯ, ರಾಷ್ಟ್ರ, ವಿದೇಶಗಳ ಗಮನ ಸೆಳೆದವು. ರಾಜ್ಯದಲ್ಲಿ ಶಿವಮೊಗ್ಗ ಹೊರತುಪಡಿಸಿ ಯಾವುದೇ ಜಿಲ್ಲೆಗಳಲ್ಲಿ ಸಾಧಿಸಲಾರದಂತ ಸಾಧನೆ ಈ ಜಿಲ್ಲೆಯಲ್ಲಿ ಸ್ವಚ್ಚತಾ ಆಂದೋಲನದಲ್ಲಿ ನಡೆಯಿತು, ಪ್ಲಾಸ್ಟಿಕ್‌ ಮುಕ್ತ ಜಿಲ್ಲೆಯನ್ನಾಗಿಸಲು ಇವರು ಕೈಗೊಂಡ ಶ್ರಮದಾನ, ಗ್ರಾಮ, ಗ್ರಾಮಗಳ ನಡುವಿನ ಸ್ಪರ್ಧೆ ದೇಶದ ಎಲ್ಲ ಕಾಣದಂತ ಹೊಸ ಪರಿಕಲ್ಪನೆಗಳು.ಜನಪ್ರತಿನಿಧಿಗಳು, ಸರ್ಕಾರಗಳು ಮಾಡದಂಥ ಕಾರ್ಯಕ್ರಮಗಳನ್ನು ಮಾಡುವ ಮೂಲಕ ತುಳಿತಕ್ಕೆ ಒಳಗಾದ ಜನತೆಗೆ ಬದುಕಿನ ಭರವಸೆಯ ಆಶಾಕಿರಣಗಳನ್ನು ಮೂಡಿಸಿರುವ ಧೀಮಂತ ಮಣ್ಣಿನ ಮಕ್ಕಳಿವರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವಾಗಲೂ ನೆನೆಯುವ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆ, ಮೋಹನ ಆಳ್ವರ ಸಾಂಸ್ಕೃತಿಕ ಹಿರಿತನಗಳ ಜೊತೆಗೆ ಕನಸಿನ ಊರಿನ ಕದತಟ್ಟಿದವರಲ್ಲಿ ಕೃಷ್ಣಮೂಲ್ಯರು, ಶೀನ ಶೆಟ್ಟಿಯೂ ಸೇರಿದಂತೆ, ವಿಪರ್ಯಾಸ ವೆಂದರೆ ಉಳಿದ ಇಬ್ಬರ ಬಳಿ ಶಿಕ್ಷಣ ಸಂಸ್ಥೆಗಳಿವೆ, ಧಾರ್ಮಿಕ ಶಕ್ತಿ ಕೇಂದ್ರವಿದೆ, ಹಣವಿದೆ ಹಾಗೂ ರಾಜಕೀಯ ಶಕ್ತಿ ಇದೆ, ಆದರೆ ಇದ್ಯಾದುವುದು ಇಲ್ಲದೇ ಸಾವಿರಾರು ಜನರ ಬದುಕನ್ನು ರೂಪಿಸಿರುವ ಈ ಇಬ್ಬರು ನಾಯಕರನ್ನು ಸರ್ಕಾರ ಇದೂವರೆಗೂ ಸರಿಯಾಗಿ ಗುರುತಿಸುವ ಕೆಲಸ ಮಾಡಿಲ್ಲ. ಈ ಇಬ್ಬರನ್ನು ಸರ್ಕಾರ ಗುರುತಿಸುವಂಥಾದರೆ ಅದು ನಾಡಿನ ಹೊಸ ಭಾಗ್ಯ ಮಾತ್ರವಲ್ಲ ಅಭಿವೃದ್ಧಿಯ ಪರಿಕಲ್ಪನೆಗಳು ಬದಲಾದಾವು, ಹಳ್ಳಿ, ಹಳ್ಳಿಗಳು ಅನಭಿವೃದ್ಧಿ, ಅಜ್ಞಾನದ ಮೂಸೆಯಿಂದ ಹೊರಬರಲು ಹೊಸ ಆಶಾಕಿರಣಗಳಾಗಲಿವೆ.

curtsy http://peoplenews1.blogspot.com/
:

ಮಂಗಳವಾರ, ಫೆಬ್ರವರಿ 9, 2010

ಅಪ್ಪ ಕೊಟ್ಟ್ದಿದ ಐದು ಪೈಸೆ

ಕಾಳ ಕೂತ್ಲಲಿಂದ ಕದಲಲು ಮನಸಾಗದೇ ಹೆಜ್ಜೆಗಳೆರಡನ್ನು ಅತ್ತಿತ್ತ ಆಡಿಸಿ ಕೊಸರಿಕೊಂಡನು. ಸಣ್ಣಗೆ ಇಣುಕುತ್ತ್ದಿದ ಸೂರ್ಯನ ಚಳಿ ಓಡಿಸುವ ಸಾಹಸದ್ಲಲಿ ಅಡ್ಡಲಾಗಿ ತೆಂಗಿನ ಮರದ ಗರಿಯೊಂದು ಅತ್ತಿತ್ತ ಆಡುತ್ತಾ ಬಳಕುತ್ತಿತ್ತು. ಕಾಳನ ಮೇಲೆ ಬೀಳುತ್ತ್ದಿದ ಬಿಸಿಲಿಗೆ ಅದು ತಡೆ ಒಡ್ಡಿತ್ತು, ಮನಸ್ಸಿನ್ಲಲೇ ತೆಂಗಿನ ಗರಿಯನ್ನು ಬೈಯ್ದುಕೊಂಡು ಕಾಳ ಸ್ವಲ್ಪ ಆ ಕಡೆಗೆ ಕುಳಿತಂತೆಯೇ ಜರುಗಿಕೊಂಡ. ಅವ್ವ ಕೂಗುವ ಮುಂಚೆ ಹ್ಲಲುಜ್ಜಿ ಶಾಲೆಗೆ ಸಿದ್ಧವಾಗಬೇಕೆಂದು ಮನಸ್ಸ್ಲಲೇ ಲೆಕ್ಕಚಾರ ಹಾಕಿಕೊಂಡ.

ಅಪ್ಪ ಸತ್ತು ಒಂದು ತಿಂಗಳು ಕಳೆಯುತ್ತಾ ಬಂದಿತ್ತು. ತಾತನನ್ನು ಅಪ್ಪ ಎಂದೂ ಅಪ್ಪನನು ಅಣ್ಣ ಎಂದು ಕರೆಯವುದು ಕಾಳನಿಗೆ ಗೊತ್ತ್ಲಿಲದೇ ಬಾಯಿ ಪಾಠವಾಗಿತ್ತು. ಅವ್ವ ಹೇಳಿಕೊಟ್ಟ್ದಿದು ಆಗೆಯೇ. ಊರ‍್ಲಲಿ ಎಲ್ರು ಅಪ್ಪನನ್ನು ಅಪ್ಪ ಎಂದೇ ಕರೆಯುತ್ತ್ದಿದರೆ ತಾನು ಮಾತ್ರ ಅಣ್ಣ ಅಂತ ಕರೆಯವುದು ಏಕೆ ಎಂಬ ಪ್ರಶ್ನೆ ಕಾಳನ್ಲಲಿ ಅನೇಕ ಸಲ ಬಂದುಹೋಗಿತ್ತು.
ಮತ್ತೇ ಕಾಳ ಚೆಡ್ಡಿ ತಡವಿಕೊಂಡ. ಅಪ್ಪ ಕೊಟ್ಟ್ದಿದ ಐದು ಪೈಸೆ ಜೇಬಿನ ಮೂಲೆಯ್ಲಲಿ ತಣ್ಣಗೆ ಕೂತುಕೊಂಡ್ದಿದನ್ನು ಖಚಿತಪಡಿಸಿಕೊಂಡು ಮತ್ತೇ ನೆನಪಿಗೆ ಜಾರಿದ.

ಅಪ್ಪನ ಬಾಯ್ಲಲಿ ಕಾಳ ಮನೋವರ ಆಗ್ದಿದ. ಅಪ್ಪ ಯಾವೊತ್ತು ಕಾಳ ಎಂದೇ ಕರೆದ್ದಿದೇ ಇಲ. ಅವ್ವ, ಅಣ್ಣ ಇಬ್ಬರು ಜತೆ ಸೇರಿ ಪ್ರೀತಿಯಿಂದ ಮನೋವರ ಎಂದೇ ಹೆಸರು ಇಟ್ಟ್ದಿದು. ಆದರೆ ಊರವರ ಬಾಯ್ಲಲಿ, ಅಷ್ಟೇ ಏಕೆ ಕೊನೆಗೆ ಅವ್ವ, ಅಪ್ಪನ ಬಾಯ್ಲಲೂ ಮನೋವರ ಈಗ ಕಾಳನೇ ಆಗಿ ರೂಪಾಂತರವಾಗಿ ಬಿಟ್ಟ್ದಿದಾನೆ. ಮನೆಯ್ಲಲಿ ಕಿತ್ತು ತಿನ್ನುತ್ತ್ದಿದ ಬಡತನ, ಯಾವಾಗಲೂ ಹಸಿದೇ ಇರಬೇಕಾದ ಅನುಭವ ಕಾಳನಿಗೆ ಮೊದಲಿನಿಂದಲೂ ಆಗಿತ್ತು.

ಬಡತನದ ಹಸಿವು ಮನೋವರನನ್ನು ಕಾಳನೆಂಬ ಅಡ್ಡ ಹೆಸರಿಗೆ ದೂಡಿತ್ತು. ಅಷ್ಟು ಚೆಂದನೆಯ ಹೆಸರು ಇದರೂ ಊರವರು ಅಡ್ಡ ಹೆಸರಿನಿಂದಲೇ ಅವನನ್ನುಕರೆಯುತ್ತ್ದಿದ್ದದು ಕಂಡು ಅನೇಕ ಸಲ ಸಿಟ್ಟು ಬಂದಿತ್ತು. ಆದರೆ ಅವನಿಗೆ ಸಾಕಷ್ಟು ಬ್ದುದಿ ಮೂಡುವ ಹೊತ್ತಿಗೆ ಅಂದರೆ ನಾಲ್ಕನೇ ತರಗತಿಗೆ ಕಾಲಿಡುವ ಮುನ್ನವೇ ಮನೋವರ ಕಾಳನಾಗಿ ಪ್ರಸಿದ್ಧಿಯಾಗಿ ಬಿಟ್ಟ್ದಿದನು.

ಮನೋವರ ಕಾಳ ಆಗ್ದಿದಕ್ಕೂ ಒಂದು ಕಥೆ ಇದೆ. ಪ್ರತಿ ವರ್ಷದಂತೆ ಆ ವರ್ಷವೂ ಊರ‍್ಲಲಿ ದೊಡ್ಡಮ್ಮ ಜಾತ್ರೆ ಸಡಗರದಿಂದ ನಡೆದಿತ್ತು. ಜಾತ್ರೆಯ ಹಿಂದಿನ ದಿನ ಕಾಲಘಟ್ಟಮ್ಮನ ಪೂಜೆ. ಪ್ರತಿ ಮನೆಯವರೂ ದೇವರಿಗೆ ಬೇಯಿಸಿದ ಅವರೆ ಕಾಳು ಹರಕೆಯಾಗಿ ಒಪ್ಪಿಸುವುದು ವಾಡಿಕೆ. ಆದರಂತೆ ದೇವರ ಮುಂದೆ ರಾಶಿರಾಶಿಯಾಗಿ ಅವರೇಕಾಳು ಬೀಳುತ್ತದೆ. ಅವರೆಕಾಳು ದೇವರಿಗೆ ಮುಡಿಹಾಸುವ ಅಗಸರಿಗೆ ಸೇರಬೇಕು. ಆ ಕಾಳನ್ನು ಮುಟ್ಟುವುದಾದಲಿ, ತಿನ್ನುವುದಾಗಲೀ ಮಾಡುವಂತ್ಲಿಲ. ಹಬ್ಬ ಆದರೂ ಮನೆಯ್ಲಲಿ ಅವ್ವ ಅಡುಗೆ ಮಾಡಿರಲ್ಲಿಲ. ಪಕ್ಕದ ಮನೆಯವರಿಂದ ಕೈಗಡವಾಗಿ ತೆಗೆದುಕೊಂಡ ಬಂದ ಕಾಳನ್ನು ದೇವರಿಗೆ ಬೇಯಿಸಿ ನೀಡಲಾಗಿತ್ತು.

ಬೆಳಿಗ್ಗೆಯಿಂದಲೂ ಹಸಿವಿನಿಂದ ಕಂಗಲಾಗ್ದಿದ ಕಾಳ ದೇವರ ಗುಡಿಗೆ ಹೋಗ್ದಿದಾಗ ಹೊಟ್ಟೆ ಹಸಿವು ತಡೆಯಲು ಆಗಲೇ ಇಲ. ಕಣ್ಮುಂದೆ ದೊಡ್ಡಮ್ಮ ದೇವತೆಗೆ ನೀಡ್ದಿದ ಅವರೇ ಕಾಳುಗಳ ರಾಶಿಯೇ ಬ್ದಿದಿರುವಾಗ ಅವನ ಹೊಟ್ಟೆ ಹಸಿವಾದರೂ ಅವುಡಿಗಚ್ಚಿ ಕುಳಿತಿಕೊಳ್ಳಲು ಹೇಗೆ ಸಾಧ್ಯ? ಹೊಟ್ಟೆಯ ಹಸಿವಿನ ಮುಂದೆ ಮರ್ಯಾದೆ ತನ್ನತನವನ್ನು ಯಾವೊತ್ತು ಉಳಿಸಿಕೊಳ್ಳಲಾರದು. ಮನೋವರ ಯಾರಿಗೂ ಕಾಣದು ಎಂದು ತಿಳಿದು ಅವರೇಕಾಳು ರಾಶಿಯಿಂದ ಕ್ದದುಕ್ದದು ಅವರೇ ಕಾಳು ತಿನ್ನುತ್ತ್ದಿದ. ಅದನ್ನು ಗಮನಿಸಿದ ಅಗಸರ ಲಕ್ಷ್ಮಕ್ಕ ಕೂಗಾಡ್ದಿದಳು. ಆವೊತ್ತಿನಿಂದ ಮನೋಹರನ್ನು ಊರವರು ಕಾಳ, ಕಾಳ ಎಂದು ಹಂಗಿಸಲು ಶುರು ಹಚ್ಚಿದರು.

ಮೊದಮೊದಲಿಗೆ ಜನರು ಕಾಳ ಎಂದು ಕೂಗುವುದಕ್ಕೆ ತನ್ನ ಅಸಹಾಯಕ ಸಿಟ್ಟನ್ನು ಮನೋಹರ ತೋರ‍್ದಿದನು. ಆದರೆ ‘ಬಡವನ ಸಿಟ್ಟು ದವಡೆಗೆ ಮೂಲ’ ಎಂಬಂತೆ ಊರವರು ಹೀಯಾಳಿಕೆಗೆ ಒಳಗೊಳಗೆ ಕೋಪ ಬರುತ್ತ್ದಿದರು ಮನೋವರ ಅದನ್ನು ತೋರಗೊಡದೇ ನಿಧಾನವಾಗಿ ಕಾಳನಾಗಿಯೇ ರೂಪಾಂತರ ಆಗಿಬಿಟ್ಟನು. ಈಗ ಅವನನ್ನು ಅವರವ್ವ. ಅಪ್ಪ ಕೂಡ ಕಾಳ ಎಂದರೂ ಬೇಸರ ಆಗುವುದ್ಲಿಲ. ಶಾಲೆಯ್ಲಲಿ ಮೇಷ್ಟುರು ಬಿಟ್ಟರೆ ಉಳಿದವರ‍್ಲೆಲರ ಬಾಯ್ಲಲೂ ಮನೋಹರ ಕಾಳ ಆಗ್ದಿದಾನೆ. ಮೇಷ್ಟರು ಕೂಡ ಹಾಜರಾತಿ ಕರೆಯುವಾಗ ಮಾತ್ರ ಮನೋವರ ಎಂದು ಕೂಗುತ್ತಾರೆ ಹೊರತು ಉಳಿದಂತೆ ಅವರ ಬಾಯ್ಲಲೂ ಅವನು ಕಾಳನೇ ಆಗಿಹೋಗ್ದಿದಾನೆ. ಆದರೆ ಅಪ್ಪ ಮಾತ್ರ ಅವನನ್ನು ಎಂದು ಕೂಡ ಕಾಳ ಎಂದು ಕರದೇ ಇಲ. ಹೀಗಾಗಿಯೇ ಅಪ್ಪ ಎಂದರೆ ಕಾಳನಿಗೆ ವಿಶೇಷ ಪ್ರೀತಿ, ಮನೋವರ ಎಂದಾಗ ಅವನ್ಲಲಿ ಆಗುವ ಖುಷಿ, ದೊಡ್ಡಸ್ತಿಕೆ ಕಾಳ ಎಂದು ಕರೆವಾಗ ಇರುವುದ್ಲಿಲ. ಯಾವಾಗಲೂ ಅಪ್ಪ ಮನೋವರ ಎಂದು ಕೂಗುತ್ತಲೇ ಇದರೆ ಎಷ್ಟು ಚೆಂದ ಎಂದು ಕಾಳ ಎಷ್ಟೋ ಸಲ ಅಂದುಕೊಂಡ್ದಿದನು.

ಹುಷಾರು ತಪ್ಪಿ ಹಾಸಿಗೆ ಹಿಡಿದ್ದಿದ ಅಪ್ಪನನ್ನು ನೋಡಲು ಫರ್ಲಾಂಗು ದೂರವ್ದಿದ ದೊಡ್ಡಮ್ಮನ ಮನೆಗೆ ಹೋಗ್ದಿದಾಗ ‘ನಿಂಗೆ ಯಾರು ಆಗ್ಲಲ ಮರಿ. ನಿನ್ನ ದೊಡ್ಡಪ್ಪನ ಮಕ್ಕಳನ್ನು ನಂಬಬೇಡ. ನಿನ್ನ ಬ್ದುದಿ ನಿನ್ನ ಕೈಯ್ಲಲಿರಲಿ. ಯಾರ‍್ಗೂ ಹೇಳಬೇಡ’ ಎಂದು ದಿಂಬಿನ ತಡಿಯ್ಲಲಿ ಮಡಗ್ದಿದ ಐದು ಪೈಸೆಯನ್ನು ಬಲವಂತವಾಗಿ ಕೈಗೆ ಗಿಡುಗಿತ್ತು. ಐದು ಪೈಸೆಗೆ ಒಂದು ದೊಡ್ಡ ಶುಂಠಿ ಪೆಂಪರ್‌ಮೆಂಟ್ ಕೊಂಡು ತಿನ್ನಬಹುದಾದರೂ ಕಾಳ ಅದನ್ನು ಖರ್ಚು ಮಾಡಿರಲ್ಲಿಲ. ಅವನ ಹದಿನಾಲ್ಕು ವರ್ಷದ್ಲಲಿ ಅಪ್ಪ ಕೊಟ್ಟ್ದಿದು ಐದು ಪೈಸೆ ಮಾತ್ರ. ಐದು ಪೈಸೆ ಕೊಟ್ಟು ಆತ್ಮಹತ್ಯೆಗೆ ಜಾರ‍್ದಿದ ಅಪ್ಪ ಈಗ ಕಾಳನಿಗೆ ಯಕ್ಷ ಪ್ರಶ್ನೆಯಾಗಿ ಕಾಡತೊಡಗಿದ.

ಅಪ್ಪ ಇದ್ದದು ಕಾಳನ ದೊಡ್ಡಮ್ಮನ ಮನೆಯ್ಲಲಿ. ಮನೆ ಭಾಗ ಆದ ಮೇಲೆ ಅಪ್ಪ ದೊಡ್ಡ ಮಗಳ ಮನೆಯ್ಲಲೇ ಉಳಿದುಕೊಂಡಿತು. ಚಿಕ್ಕಮಗಳಿಗೆ ಆಸ್ತಿಯ್ಲಲಿ ದೊಡ್ಡ ಪಾಲು ಕೊಡದ ಕಾರಣ ಒಂದೇ ಊರ‍್ಲಲಿ ಹೆಣ್ಣು ಮಕ್ಕಳಿಬ್ಬರ ಮನೆಗಳ್ದಿದರೂ ಅಪ್ಪ ದೊಡ್ಡಮ್ಮ ಮನೆಯ್ಲಲೇ ಉಳಿದುಕೊಂಡಿತು. ಮನೆ ಅಳಿಯನಾಗಿ ಸೇರಿಕೊಂಡ್ದಿದ ಅಪ್ಪನಿಗೆ ಮೊದಲಿನಿಂದಲೂ ಸಿಕ್ಕ ಸ್ವಾತಂತ್ರ್ಯ ಅಷ್ಟಕಷ್ಟೇ ಎನ್ನಬೇಕು. ದುಡಿದ ಹಣವನ್ನು ಅಜ್ಜಿಯ ಕೈಗೆ ಕೊಡಬೇಕಾಗಿತ್ತು. ಅಜ್ಜಿಯದೇ ಯಜಮಾನಿಕೆ. ಬೊಂಡ, ಕೇಸರಿಭಾತ್ ಇಷ್ಟಪಡುತ್ತ್ದಿದ ಅಪ್ಪ ಒಮ್ಮೆ ಭಟ್ಟರ ಹೋಟೆಲಿನ್ಲಲಿ ಇಪ್ಪತ್ತು ರೂಪಾಯಿವರೆಗೂ ಸಾಲ ಮಾಡಿ ಮನೆಯ್ಲಲಿ ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿತ್ತು. ಅವ್ವನಿಗೂ, ಅಪ್ಪನಿಗೂ ನಡೆದ ಜಗಳದ್ಲಲಿ ತಾರಕಕ್ಕೆ ಮುಟ್ಟಿ ಅಪ್ಪ ಎರಡು ತಿಂಗಳು ಊರು ಬಿಟ್ಟು ಓಡಿ ಹೋಗಿತ್ತು. ಆನಂತರ ಊರಿನ ನಾರಾಯಣಪ್ಪ ಹುಡುಕಿ ಅಪ್ಪನನ್ನು ಕರೆದುತಂದ್ದಿದರು. ಹುಳುಕು ಮುಖದ ಅಪ್ಪ ಯಾವಾಗಲೂ ಬೀಡಿ ಸೇದುವುದು ಕೂಡ ಅಭ್ಯಾಸ ಮಾಡಿಕೊಂಡಿತ್ತು. ಪ್ರತಿ ದಿನ ಏನೆಂದರೂ ಮೂರು ನಾಲ್ಕು ಕಟ್ಟು ಬೀಡಿಗಳನ್ನು ಸೇದಲೇ ಬೇಕಿತ್ತು, ಬೀಡಿ ಸೇದಲು ಬಾಳೆಕಾಯಿ ತೂಕದ್ಲಲಿ ಸುಳ್ಳು ಲೆಕ್ಕ ಹೇಳುತ್ತಿತ್ತು ಅದು ಕೂಡ ಮನೆಯ್ಲಲಿ ಜಗಳದ ಕದನ ರೂಪಿಸಿ ಬಿಡುತ್ತಿತ್ತು.

ಮನೆಯ್ಲಲಿ ಜಗಳ ಆದಾಗಲ್ಲೆಲ ತಲೆಗೆ ಕಟ್ಟಿಕೊಂಡ ಟವೆಲ್‌ಅನ್ನು ಕೊಡವಿ ಮನೆಯಿಂದ ಆಚೆ ಬರುತ್ತ್ದಿದ ಅಪ್ಪ ಸುಮ್ಮನೆ ನಡೆದುಹೋಗಿ ಬಿಡುತ್ತ್ದಿದ. ತಾನೇ ದುಡಿದ, ತಾನೇ ಬೆಳೆದ ಬೆಳೆಯನ್ನು ಮಾರಲು ಆಗದಂಥ ಸ್ಥಿತಿಯ್ದಿದರೂ ಕಟ್ಟು ಬೀಡಿ ಇದರೆ ಅವನಿಗೆ ಸಾಕಾಗಿತ್ತು. ಆದರೆ ಕಟ್ಟು ಬೀಡಿಗಾಗಿ ಅಪ್ಪ ಬಾವಿಗೆ ಬ್ದಿದ್ದದು ಯಾಕೋ ? ಅದು ಸರಿ ಅಪ್ಪ ಬಾವಿಗೆ ಬೀಳುವ ಮುನ್ನ ನನ್ನನ್ನು ನೆನಪು ಮಾಡಿಕೊಂಡಿರಬಹುದೇ? ಕಾಳ ಯೋಚಿಸುತ್ತಲೇ ಇದ.

ಕಟ್ಟು ಬೀಡಿ ತಂದುಕೊಡಲ್ಲಿಲ ಎಂಬ ಒಂದೇ ಕಾರಣಕ್ಕೆ ಹಾಸಿಗೆ ಹಿಡಿದ್ದಿದ ಅಪ್ಪ ಬೆಳಗ್ಗೆ ಎದವನು ತಾನೇ ತೋಡಿಸ್ದಿದ ಬಾವಿಗೆ ಮಗುಚಿಕೊಂಡ್ದಿದ. ಬಾವಿಗೆ ಬೀಳುವ ಮುನ್ನ ಅಪ್ಪ ತನ್ನ ಮೊಂಡಾಸನ್ನು ಬಾವಿ ಕ್ಲಲಿನ ಮೇಲೆ ಇಟ್ಟ್ದಿದ. ಅಪ್ಪ ಮೊಂಡಾಸು ತೆಗೆಯುವಾಗ ಯಾರನ್ನು ನೆನಪುಮಾಡಿಕೊಂಡಿರಬಹುದು ಎಂಬುದೇ ಕಾಳನಿಗೆ ಕಾಡಲು ಶುರುಹಚ್ಚಿತು.
ಮುಂದುವರೆಯುವುದು